dcsimg

ಮಲ್ಲಿಗೆ ( Kannada )

provided by wikipedia emerging languages
 src=
ಮಲ್ಲಿಗೆ ಹೂ

ಮಲ್ಲಿಗೆಯು ಗತಪ್ರಪಂಚದ ಉಷ್ಣವಲಯ ಮತ್ತು ಸುಖೋಷ್ಣ ಪ್ರದೇಶಗಳಿಗೆ ಸ್ಥಳೀಯವಾದ ಸುಮಾರು ೨೦೦ ಜಾತಿಗಳಿರುವ ಆಲಿವ್ ಕುಟುಂಬವಾದ ಓಲಿಯಾಸೀದಲ್ಲಿನ ಪೊದೆ ಮತ್ತು ಬಳ್ಳಿಗಳ ಒಂದು ಪ್ರಜಾತಿ. ಬಹುತೇಕ ಜಾತಿಗಳು ಇತರ ಸಸ್ಯಗಳು ಹಾಗೂ ಗೇಟುಗಳು ಅಥವಾ ಬೇಲಿಗಳಂತಹ ರಚನೆಗಳ ಮೇಲೆ ಬಳ್ಳಿಗಳಾಗಿ ಬೆಳೆಯುತ್ತವೆ. ಎಲೆಗಳು ನಿತ್ಯಹರಿದ್ವರ್ಣ ಅಥವಾ ಪರ್ಣಪಾತಿಯಾಗಿರಬಹುದು.

ಮಲ್ಲಿಗೆಯಲ್ಲಿ ಹಲವು ವಿಧಗಳಿವೆ. ಕಾಡುಮಲ್ಲಿಗೆ, ಸೂಜಿಮಲ್ಲಿಗೆ, ಜಾಜಿಮಲ್ಲಿಗೆ, ದುಂಡುಮಲ್ಲಿಗೆ, ಮೈಸೂರು ಮಲ್ಲಿಗೆ, ಮಂಗಳೂರು ಮಲ್ಲಿಗೆ, ಮುತ್ತುಮಲ್ಲಿಗೆ.

ಬೇಸಾಯ ಕ್ರಮ

ಮಲ್ಲಿಗೆ ಇದೊಂದು ದೀರ್ಘಕಾಲಿಕ ಪುಷ್ಪ ಬೆಳೆ. ಒಮ್ಮೆ ನಾಟಿ ಮಾಡಿದರೆ, ಕನಿಷ್ಠ 20 ವರ್ಷದವರೆಗೆ ಹೂವನ್ನು ಪಡೆಯಬಹುದು. ಮೊದಲು ಜಮೀನನ್ನು ಹದಗೊಳಿಸಿದ ಬಳಿಕ 8 ್ಢ 8 ಅಡಿ ಅಂತರದಲ್ಲಿ ಗಿಡ ನಾಟಿ ಮಾಡಬೇಕು. ನಂತರ 3-4 ದಿನಕ್ಕೊಮ್ಮೆ ನೀರು ಹಾಯಿಸಬೇಕು. ಇದು ಗಿಡ ನೆಟ್ಟ 2 ವರ್ಷದ ನಂತರ ಚೆನ್ನಾಗಿ ಹೂವು ಬಿಡಲು ಪ್ರಾರಂಭಿಸುತ್ತದೆ. ಇದಕ್ಕಿಂತ ಮೊದಲೇ ಹೂ ಬಿಡುತ್ತದೆ. ಆದರೆ, ಇಳುವರಿ ಪ್ರಮಾಣ ಕಡಿಮೆ ಇರುತ್ತದೆ. ಇನ್ನು ಹೂವು ಬಿಡಿಸಲು ಆಳುಗಳು ಹೆಚ್ಚು ಬೇಕಾಗುತ್ತವೆ. ನಿತ್ಯವೂ ಹೂ ಬಿಡಿಸಬೇಕು. ಒಂದು ದಿನ ಹೂ ಬಿಡಿಸದಿದ್ದರೆ ಅವು ಹಾನಿಯಾದಂತೆ ಸರಿ. ಮಲ್ಲಿಗೆ ಕೃಷಿ ಕೈಗೊಳ್ಳಲು ಮಳೆಗಾಲದ ಆರಂಭ ಅಂದರೆ ಜೂನ್ ಪ್ರಶಸ್ತ. ಮಳೆಗಾಲದಲ್ಲಿ ಇದರ ಇಳುವರಿ ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ಹೂವು ಬಿಡುವುದಿಲ್ಲ. ಆ ಸಮಯದಲ್ಲಿ ಗಿಡವನ್ನು 2 ಅಡಿ ಬಿಟ್ಟು ಉಳಿದದ್ದನ್ನು ಕಟಾವು ಮಾಡಬೇಕು. ಚಳಿಗಾಲದ ನಂತರ ಚಿಗುರೊಡೆಯುತ್ತದೆ. ಬಳಿಕ ಹೂವು ಪ್ರಾರಂಭಿಸುತ್ತದೆ. ಈ ರೀತಿ ಪ್ರತಿ ಚಳಿಗಾಲದಲ್ಲೂ ಕಟಾವು ಮಾಡಬೇಕು.

ಬಳಕೆ

ನಮ್ಮ ದೇಶದ ಮಲ್ಲಿಗೆ ಶ್ರೀಲಂಕಾ, ಸಿಂಗಪೂರ್, ಮಲೇಶಿಯಾ, ಅರಬ್ ದೇಶಗಳಿಗೆ ರಫ್ತಾಗುತ್ತದೆ. ಮಲ್ಲಿಗೆಯನ್ನು ಸುಗಂಧಿತ ತೈಲ ತಯಾರಿಸಲು ಮತ್ತು ಅತ್ತರ್ ತಯಾರಿಸಲು ಬಳಸಲಾಗುತ್ತದೆ. ಮಲ್ಲಿಗೆಯ ತೈಲವನ್ನು ಸಾಬೂನು ಮತ್ತು ಇತರ ಸೌಂದರ್ಯವರ್ಧಕ ಸಾಧನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಎಲ್ಲ ಸುಗಂಧದ್ರವ್ಯಗಳಲ್ಲಿಯೂ ಮಲ್ಲಿಗೆ ತೈಲವಿದ್ದೇ ಇರುತ್ತದೆ. ಮಲ್ಲಿಗೆಯ ಸುಗಂಧಕ್ಕೆ ಬದಲಿಯಾಗಿ ಯಾವುದೇ ರಾಸಾಯನಿಕಗಳನ್ನು ಬಳಸಲು ಬರುವುದಿಲ್ಲ. ಮಲ್ಲಿಗೆಯಲ್ಲಿ ಸೂಜಿಮಲ್ಲಿಗೆ, ದುಂಡುಮಲ್ಲಿಗೆ, ಮಲ್ಲಿಕಾ, ನಿತ್ಯಮಲ್ಲಿಗೆ, ಜಾಜಿಮಲ್ಲಿಗೆ ಮುಂತಾದ ಅನೇಕ ವಿಧಗಳಿವೆ. ಆದರೆ ಜಾಜಿಮಲ್ಲಿಗೆಯಲ್ಲಿ ಔಷಧೀಯ ಗುಣ ಅಧಿಕ. ಜಾಜಿಮಲ್ಲಿಗೆಯ ತವರೂರು ಭಾರತ. ಜಾಜಿಯ ಸುಗಂಧದೆಣ್ಣೆಗೆ ವಿಶ್ವದ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆಯಿದೆ. ಎಣ್ಣೆಯಲ್ಲಿ ಔಷಧೀಯ ಗುಣವಿರುತ್ತದೆ. ಮಲ್ಲಿಗೆ ಮೊಗ್ಗುಗಳಲ್ಲಿ ಸುಗಂಧ ನೀಡುವ ಇಂಡೋಲ್ ಎಂಬ ರಾಸಾಯನಿಕ ಪದಾರ್ಥ ಇದೆ. ಪೂರ್ತಿ ಅರಳಿದ ಮತ್ತು ಆಗ ತಾನೆ ಬಿಡಿಸಿದ ಹೂಗಳನ್ನು ಎಣ್ಣೆ ತೆಗೆಯಲು ಬಳಸುತ್ತಾರೆ. ಜಾಜಿಯಿಂದ ತಯಾರಾಗುವುದು ಜಾಸ್ಮಿನ್ ತೈಲ. ಈ ಹೂಗಳನ್ನು ಗಿಡದಿಂದ ಬೇರ್ಪಡಿಸಿದ ಕೆಲ ಸಮಯದವರೆಗೂ ಅದರ ಸುವಾಸನೆ ವೃದ್ಧಿಯಾಗುತ್ತಿರುತ್ತದೆ. ಹೂಗಳನ್ನು ಮಾಲೆಗಳಲ್ಲಿ, ಹಾರಗಳಲ್ಲೂ ಬಳಸುತ್ತಾರೆ.

ಇತರ ಭಾ‍‍‌ಷೆಗಳಲ್ಲಿ

ಸಂಸ್ಕೃತ: ವಾರ್ಷಿಕಿ, ಮಲ್ಲಿಕಾ

ಹಿಂದಿ: ಮೊಗ್ರಾ, ಮಲ್ಲಿಕಾ

ತಮಿಳು: ಮಲ್ಲಿಗೈ

ಇಂಗ್ಲಿಷ್: ಅರೇಬಿಯನ್ ಜಾಸ್ಮಿನ್

ತೆಲುಗು: ಮಲ್ಲೆಪುಷ್ಪಲು

ಮಲಯಾಳಂ: ಚಿರು ಪಿಚ್ಚಕಂ, ನಲ್ಲ ಮುಲ್ಲೈ

ಔಷಧೀಯ ಗುಣಗಳು

ಕಿವಿ ಮತ್ತು ಮೂಗಿನ ರೋಗಗಳಲ್ಲಿ ಮಲ್ಲಿಗೆಯಿಂದ ತಯಾರಿಸಿದ ತೈಲವನ್ನು ಉಪಯೋಗಿಸಸಲಾಗುತ್ತದೆ. ಮಲ್ಲಿಗೆಯ ಬೇರು, ಹೂ ಮತ್ತು ಎಲೆಗಳು ಎದೆ ಹಾಲಿನ ಉತ್ಪತ್ತಿಯನ್ನು ತಗ್ಗಿಸುತ್ತವೆ. ಚೀನಾ ದೇಶದಲ್ಲಿ ಚಹಾದಲ್ಲಿ ಸುಗಂಧ ಬರಿಸಲು ಮಲ್ಲಿಗೆ ಹೂಗಳನ್ನು ಹಾಕಿ ಟೀ ತಯಾರಿಸುತ್ತಾರೆ. ದೃಷ್ಟಿದೋಷದ ತೊಂದರೆಯಿರುವವರಿಗೆ ಮತ್ತು ಉನ್ಮಾದದಿಂದ ಬಳಲುವವರಿಗೆ ಮಲ್ಲಿಗೆಯ ಎಲೆಯ ರಸದಿಂದ ತಯಾರಿಸಿದ ತೈಲವನ್ನು ತಲೆಗೆ ಉಪಯೋಗಿಸಲು ಹೇಳಬೇಕು. ಗಾಯ ಹಾಗೂ ಹುಣ್ಣುಗಳಿಗೆ ಒಣಗಿದ ಮಲ್ಲಿಗೆ ಎಲೆಗಳನ್ನು ನೀರಿನಲ್ಲಿ ನೆನೆಯಿಟ್ಟು ನಂತರ ಅರೆದು ಪೊಲ್ಟೀಸ್ ಮಾಡಿ ಕಟ್ಟಬೇಕು. ಮಲ್ಲಿಗೆಯು ವಿಷಹರವಾಗಿಯೂ ಕೆಲಸ ಮಾಡುತ್ತದೆ. ಅರುಚಿಯನ್ನು ಹೋಗಲಾಡಿಸಿ ರುಚಿ ಹೆಚ್ಚಿಸುತ್ತದೆ. ಇದು ರಕ್ತವಿಕಾರ, ದಂತರೋಗ, ನೇತ್ರರೋಗ, ಶಿರೋರೋಗಗಳಲ್ಲಿ ಉಪಯುಕ್ತವಿದೆ. ಅಡವಿಮಲ್ಲಿಗೆಯ ಬೇರು ಹುಳಕಡ್ಡಿ ತೊಂದರೆಯಿರುವವರಿಗೆ ತೊಗಟೆಯನ್ನು ಕತ್ತರಿಸಿದಾಗ ಬರುವ ಹಾಲಿನಂತಹ ರಸವನ್ನು ಲೇಪಿಸಲು ಉಪಯೋಗಿಸಬೇಕು.[೪]

ಮಣ್ಣು

ಸಾಮಾನ್ಯವಾಗಿ ಮಲ್ಲಿಗೆ ಎಲ್ಲ ನಮೂನೆಯ ಮಣ್ಣಲ್ಲೂ ಬೆಳೆಯುತ್ತದೆ. ಮರಳು ಮಿಶ್ರಿತ ಕೆಂಪು ಮಣ್ಣು ಮತ್ತು ಮಸಾರೆ (ಕಲ್ಲುಮಿಶ್ರಿತ ಮಣ್ಣು) ಭೂಮಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಳುವರಿ ಬರುತ್ತದೆ.

ಮಲ್ಲಿಗೆಯ ಭಾವಚಿತ್ರಗಳು

ಮೂಲಗಳು

  1. "Jasminum" (HTML). Index Nominum Genericorum. International Association for Plant Taxonomy. Retrieved 2008-06-03.
  2. "10. Jasminum Linnaeus" (HTML). Chinese Plant Names. 15: 307. Retrieved 2008-06-03.
  3. UniProt. "Jasminum" (HTML). Retrieved 2008-06-03.
  4. ಪುಷ್ಪೌಷಧಿ

ಪುಷ್ಪೌಷಧಿ

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಮಲ್ಲಿಗೆ: Brief Summary ( Kannada )

provided by wikipedia emerging languages
 src= ಮಲ್ಲಿಗೆ ಹೂ

ಮಲ್ಲಿಗೆಯು ಗತಪ್ರಪಂಚದ ಉಷ್ಣವಲಯ ಮತ್ತು ಸುಖೋಷ್ಣ ಪ್ರದೇಶಗಳಿಗೆ ಸ್ಥಳೀಯವಾದ ಸುಮಾರು ೨೦೦ ಜಾತಿಗಳಿರುವ ಆಲಿವ್ ಕುಟುಂಬವಾದ ಓಲಿಯಾಸೀದಲ್ಲಿನ ಪೊದೆ ಮತ್ತು ಬಳ್ಳಿಗಳ ಒಂದು ಪ್ರಜಾತಿ. ಬಹುತೇಕ ಜಾತಿಗಳು ಇತರ ಸಸ್ಯಗಳು ಹಾಗೂ ಗೇಟುಗಳು ಅಥವಾ ಬೇಲಿಗಳಂತಹ ರಚನೆಗಳ ಮೇಲೆ ಬಳ್ಳಿಗಳಾಗಿ ಬೆಳೆಯುತ್ತವೆ. ಎಲೆಗಳು ನಿತ್ಯಹರಿದ್ವರ್ಣ ಅಥವಾ ಪರ್ಣಪಾತಿಯಾಗಿರಬಹುದು.

ಮಲ್ಲಿಗೆಯಲ್ಲಿ ಹಲವು ವಿಧಗಳಿವೆ. ಕಾಡುಮಲ್ಲಿಗೆ, ಸೂಜಿಮಲ್ಲಿಗೆ, ಜಾಜಿಮಲ್ಲಿಗೆ, ದುಂಡುಮಲ್ಲಿಗೆ, ಮೈಸೂರು ಮಲ್ಲಿಗೆ, ಮಂಗಳೂರು ಮಲ್ಲಿಗೆ, ಮುತ್ತುಮಲ್ಲಿಗೆ.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು